ದೀಪಗಳ
ಕರೆಯೊಲೆ
ದೀಪಗಳ
ಈ ಹಬ್ಬ ತಂದಿತು ಪ್ರಕಾಶ, ಕೇಳಿತು ಚಿಂತನೆ ಒಳಗಿಂದ,
ಹರಡಿಸುವವ ನೀನ್ಯಾರು ಈ ಪ್ರಕಾಶ?
ಪ್ರಕಾಶ ಲೀನವಾಯಿತು, ಉತ್ತರಿಸಿತು ಮನಕೆ
ನಾನೊಲ್ಲೆ ನನ್ನ ಪ್ರಸಾರ , ಅದೋ
ನಿನಗೊಂದು ಅನುಭವ
ಅವಸರ
ಸಡಗರ ಇದು ನಿನ್ನ ಚಿಂತನೆ
,
ನಾನೊಲ್ಲೆ
ನನ್ನ ಪ್ರಭಾವ , ಅದು ನಿನ್ನ ಮನೋಭಾವ ||
ಬನ್ನಿರಿ
ತನ್ನಿರಿ ಹರುಷವ, ಅನುಭವಿಸಿ ಪ್ರಕಾಶವ ,
ಈ
ದೀಪಗಳಾಗಲಿ ನಿಮ್ಮ ನಿತ್ಯ ಚೇತನ ।।
ಎಂದೆಂದೂ ನಿಮ್ಮೊಂದಿಗೆ,
ಈ ಶುಭಾಶಯಗಳೊಂದಿಗೆ
ಇದೊಂದು
ದೀಪಗಳ ಕರೆಯೋಲೆ
No comments:
Post a Comment