ನಡೆ ನಡೆ ಮುನ್ನಡೆ, ನಡೆ ಗುರಿಯ ಕಡೆ
ಗುರುತಿಸು ನಿನ್ನ ಗುರಿಯ
ನಡೆ ನಡೆ ಮುನ್ನಡೆ||
ಕೇಳುತಿರಲಿ ಮೊಳಗುತಿರಲಿ, ಈ ಸೂಕ್ಷ ತರಂಗ
ಸ್ಪಂದಿಸು ವಂದಿಸು, ಇದು ಬಾಳಿನ ಭವ್ಯ ರಂಗ
ನಡೆ ನಡೆ ಮುನ್ನಡೆ||
ತೋರುತಿರಲಿ ಬೆಳಗುತಿರಲಿ , ಈ ದಿವ್ಯ ಪ್ರಕಾಶ
ಚಿಂತಿಸು ಕಲ್ಪಿಸು , ಇದು ಬಾಳಿನ ಚಿತ್ರ ರಂಗ
ನಡೆ ನಡೆ ಮುನ್ನಡೆ ।।
ಹಿಮ್ಮೆಟ್ಟಿಸು ನಿನ್ನ ಭಯವ , ಮುನ್ನಡೆ ಈ ಜಗವ
ಆಲಿಸು ನಿನ್ನ ಹೃದಯವ, ಇದು ಬಾಳಿನ ಮನೋ ರಂಗ
ನಡೆ ನಡೆ ಮುನ್ನಡೆ ।।
ವರ್ತಿಸು ಪರಿವರ್ತಿಸು , ಸಂಕಲ್ಪ ಮಾನವ ನಾಗು
ತೆರೆಯುವುದು ಒಂದು ದಿನ , ಆ ವಿಸ್ಮಯ ಲೋಕ
ನಡೆ ನಡೆ ಮುನ್ನಡೆ
ನಡೆ ಗುರಿಯ ಕಡೆ||